News Cafe | Talk War Between Zameer Ahmed Khan & DK Shivakumar | July 24, 2022

2022-07-24 8

ದಿನೇ ದಿನೇ ಕಾಂಗ್ರೆಸ್‍ನಲ್ಲಿ ಕುರ್ಚಿ ಕದನ ಜೋರಾಗಿದೆ. ಜೊತೆಗೆ ಜಮೀರ್ ವರ್ಸಸ್ ಡಿಕೆಶಿ ಟಾಕ್‍ವಾರ್ ಸಹ ಮಿತಿ ಮೀರ್ತಿದೆ. ಡಿಕೆಶಿ ವಾನಿಂಗ್ ಬಳಿಕವೂ ಶಾಸಕ ಜಮೀರ್ ಸಿದ್ದು ಜಪ ಮಾಡಿದ್ದು ಕಾಂಗ್ರೆಸ್‍ನಲ್ಲಿ ಟಾಕ್‍ವಾರ್ ಹೆಚ್ಚಿಸಿದೆ. ಈ ಮಧ್ಯೆ ಮಾಜಿ ಸಚಿವ ಚಲುವರಾಯಸ್ವಾಮಿ ಡಿಕೆ ಸುರೇಶ್ ಮನೆಗೆ ಭೇಟಿ ನೀಡಿದ್ದು.. ಜಮೀರ್ ವಿರುದ್ಧ ಹರಿಹಾಯ್ದಿದ್ದಾರೆ. ಒಕ್ಕಲಿಗರ ಬಗ್ಗೆ ಮಾತಾಡದಂತೆ ಚಲುವರಾಯಸ್ವಾಮಿ ತಾಕೀತು ಮಾಡಿದ್ದಾರೆ. ಜಮೀರ್ ನಡೆಯಿಂದ ಜೆಡಿಎಸ್‍ಗೆ ಲಾಭವಾಗಬಹುದು ಹೀಗಾಗಿ ಆರಂಭದಲ್ಲೇ ವಿವಾದವನ್ನು ತಣ್ಣಗಾಗಿಸಲು ಚಲುವರಾಯಸ್ವಾಮಿ ಮುಂದಾಗಿದ್ದಾರೆ. ತಕ್ಷಣವೇ ಜಮೀರ್ ಜೊತೆ ಮಾತುಕತೆ ನಡೆಸುವುದಾಗಿ ಚಲುವರಾಯಸ್ವಾಮಿ ಹೇಳಿದ್ದಾರೆ. ಅಲ್ಲದೇ ವಿವಾದಕ್ಕೆ ಅಂತ್ಯ ಹಾಡಲು ಸಿದ್ದರಾಮಯ್ಯ ಸಹ ಸೂಚಿಸಿದ್ರು ಎನ್ನಲಾಗ್ಗಿದ್ದು.. ಹೀಗಾಗಿ ಜಮೀರ್, ಸಿದ್ದು ಆಪ್ತರಾದ ಚಲುವರಾಯಸ್ವಾಮಿ ಖುದ್ದು ಫೀಲ್ಡ್‍ಗಿಳಿದಿದ್ದಾರೆ. ಕಟುನುಡಿಗಳ ಮೂಲಕ ಆಪ್ತನಿಗೆ ಸುಮ್ಮನಿರುವಂತೆ ಪರೋಕ್ಷವಾಗಿ ಸೂಚಿಸಿದ್ದಾರೆ. ಇನ್ನು ಶಾಸಕ ಜಮೀರ್‍ಗೆ ಶೋಕಾಸ್ ನೋಟಿಸ್ ಮಾಡಿ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಸ್ತುಪಾಲನ ಸಮಿತಿ ರೆಹಮಾನ್ ಖಾನ್‍ಗೆ ಖುದ್ದು ಡಿಕೆಶಿ ಸೂಚಿಸಿದ್ದಾರೆ. ಇದೆಲ್ಲದರ ಮಧ್ಯೆ ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತುಟಿ ಬಿಚ್ಚಿಲ್ಲ.. ಸಿದ್ದರಾಮೋತ್ಸವದ ವರೆಗೆ ಸಿದ್ದು ಮೌನವಾಗಿರ್ತಾರಾ ಎಂದ ಗುಸುಗುಸು ಕೇಳಿ ಬರ್ತಿದೆ.

#publictv #newscafe